Bidar – Exploring the traces of Bahamani Kingdom

Chapter 1 –

ವೃತ್ತಿ ಜೀವನದ ಕಬಂಧ ಬಾಹುವಿನಲ್ಲಿ ಸಿಲುಕಿ, ಸಮಯದ ಪರಿವೆಯೇ ಇಲ್ಲದೆ,ದೈನಂದಿನ ಕೆಲಸ-ಕಾರ್ಯಗಳಲ್ಲಿ ಮುಳುಗಿ ದಿನ ದೂಡುತ್ತಿದ್ದ ನನಗೆ ಒಂದೊಂದು ದಿನ ಶರಧಿಯ ಕ್ಷಿತಿಜದಂತೆ ಭಾಸವಗುತ್ತಿತ್ತು. ಸಾಗಿದಷ್ಟು ಕೊನೆಯಿಲ್ಲ ! ನಿತ್ಯ ನಿರಂತರ ಪಯಣ.

ಲ್ಯಾಪ್ಟಾಪ್ ಬ್ಯಾಗ್ ಬೆನ್ನಿಗೇರಿಸಿ, ID ಕಾರ್ಡ್ ಕೊರಳಿಗೆ ನೇತಾಡಿಸಿ ಠೀವಿಯಿಂದ ಆಫೀಸ್ ಕಡೆ ದಾಪುಗಾಲು ಹಾಕುವ ಯುವಕ-ಯುವತಿಯರ ಗೋಳು ಅವರವರ ಅಂತರಾತ್ಮಕ್ಕೆ ಮಾತ್ರ ಗೊತ್ತು !! ಬಹುಶಃ ನನ್ನ ಆಫೀಸ್ ಗೆ HR ಗಳನ್ನು ಹೊರತುಪಡಿಸಿ, ಮಿಕ್ಕುಳಿದವರು ನಗುವೆಂಬ ಅಭಿವ್ಯಕ್ತಿಯನ್ನು ಮನೆಯ ತಿಜೋರಿಯಲ್ಲಿ ಭದ್ರವಾಗಿರಿಸಿ, ಮೊರೆಯನ್ನು ಕುಂಬಳಕಾಯಿ ಹಾಗೆ ಊದಿಸಿಕೊಂಡು ಬರುವವರೆ ಹೆಚ್ಚು !!! ಕಾಲೇಜ್ ದಿನಗಳಲ್ಲಿ ಪರೀಕ್ಷೆಯ ಸಮಯದಲ್ಲೇ ಈ ತರಹದ ವಾತಾವರಣ ಕಾಣಸಿಗುವುದು !

ನಗುನಗುತ್ತಾ ದಿನ ದೂಡಬೇಕಾದವರು , ಈ ಕೆಲಸದ ಒತ್ತಡದಲ್ಲಿ ಬೆಂದು, ಹಣ ಸಂಪಾದನೆಯ ಕನಸಿನ ಕುದುರೆಯ ಬೆನ್ನತ್ತಿ ಸಾಗುವಾಗ, ಸಂತೋಷ–ನೆಮ್ಮದಿ-ಆರೋಗ್ಯ ಮುಂತಾದ ಬಹು ಮುಖ್ಯ ಅಂಶಗಳನ್ನು ದಾರಿಮಧ್ಯೆಯೇ ಕಳೆದುಕೊಂಡಿರುತ್ತಾರೆ. ಅಂತ್ಯದಲ್ಲಿ ಇವು ಬೇಕೆಂದರೂ ಮರಳಿ ಪಡೆಯಲಾರದಂತ ಸ್ಥಿತಿ !

ನಾನು ಕೂಡ ಈ ಕಪಿ ಮುಷ್ಟಿಯಲ್ಲಿ ಸಿಲುಕಿ ಎರಡು ಸಂವಸ್ಸರಗಳುರುಳಿವೆ ! ಆ ಕಾಣದ ಕುದುರೆಯ ಬೆನ್ನೆರುವಂತ ಸನ್ನಿವೇಶ ನಮಗೆ ಬಾರದಿರಲಿ !!

“ಕಾರ್ಪೊರೇಟ್ ಲೋಕ ಬರಡಾಗಿದ್ದರೂ, ಇದರಾಚೆಗಿನ ಲೋಕ ಇನ್ನೂಹಚ್ಚ ಹಸುರಾಗಿದೆ”

ಹೈದರಾಬಾದಿನಲ್ಲಿ ನಾನಿನ್ನುರುವುದು ಕೇವಲ ಬೆರಳೆಣಿಕೆಯ ದಿನಗಳಷ್ಟೇ. ಇಲ್ಲಿಂದ ಕಾಲ್ಕೀಳುವ ಮುನ್ನ ಎಲ್ಲಾದರೂ ಪ್ರಯಾಣ ಮಾಡಿ, ಹೊಸ ಊರಿನ ಗಾಳಿಯನ್ನು ಆಸ್ವಾದಿಸಬೇಕೆಂಬ ಯೋಚನೆ ಆಗಾಗ ನನ್ನ ಕೆಣಕಿ ಮಾಯವಾಗುತ್ತಿತ್ತು ! ಆದರೆ ಕೆಲಸದ ಒತ್ತಡದಲ್ಲಿ, ಈ ವಿಚಾರಕ್ಕೆ ನೀರೆರೆದು ಪೋಷಿಸುವಷ್ಟು ಸಮಯವಿರಲಿಲ್ಲ !!

Oh wait ! what did i say ! God. ನಾನೂ ಕೂಡ ನನಗರಿವಿಲ್ಲದಂತೆ ಈ ಹುಚ್ಚು ಕುದುರೆಯ ಸವಾರಿಯನ್ನು ಆರಂಭಿಸಿದ್ದೆನೆಯೇ ?? ಒಂದು ಕ್ಷಣ ಅವಕ್ಕಾದೆ ! ಮಾಡುತ್ತಿದ್ದ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿ ವಿನೀತ್ ಗೆ ಫೋನಾಯಿಸಿದೆ !


Chapter 2 –

“Bro..Bike ride chalenge yaar”, ಎಂದು ವಿನೀತ್ ಒಂದೇ ಉಸಿರಿನಲ್ಲಿ ತನ್ನ ಮನದಾಳದ ಮಾತನ್ನು ಹೊರಹಾಕಿದ. ಇನ್ನೇನು ಬೇಕು?

“ರೋಗಿ ಬಯಸಿದ್ದೂ ಚಿಕನ್ 65, ವೈದ್ಯ ಹೇಳಿದ್ದೂ ಚಿಕನ್ 65”

ಈ ಮಾತು ಕೇಳಿ ಮನಸ್ಸು ಬಲೂನ್ ನಂತೆ ಹಿಗ್ಗುತ್ತಾ ಇರಬೇಕಾದ್ರೆ, “ye sab theek hai, tu bata jaana kaha?” ಎಂಬ ಪ್ರಶ್ನೆ ಬ್ರಹ್ಮಾಸ್ತ್ರದಂತೆ ಅಪ್ಪಳಿಸಿತು. ಈ ಒಂದು ಮಾತು ಸಾಕಾಯಿತು ನೋಡಿ, ನನ್ನ ಗಾಳಿ ಗೋಪುರವನ್ನು ಧ್ವಂಸಗೊಳಿಸಿ ನನ್ನನ್ನು ಮರಳಿ ವಾಸ್ತವದ ಕಡೆ ನೂಕಲು ! ಗಮ್ಯ ಸ್ಥಾನದ ಪರಿವೆ ಇಲ್ಲದೆ, ಸವಾರಿಯ ಕನಸು ಕಾಣುತ್ತಿದ್ದ ನಾನೆಂತ ಮೂರ್ಖ !

Actually, ಎಲ್ಲ ಪ್ರಯಾಣದ ಆರಂಭದಲ್ಲಿ ಈ ಒಂದು ಪ್ರಶ್ನೆ ಉಧ್ಭವಿಸುವುದು ಸರ್ವೇಸಮಾನ್ಯ. ಒಂದು ಜವಾಬ್ದಾರಿ ಕೂಡ. ಕನಸು ಕಾಣುತ್ತ ಶಾಂತಚಿತ್ತನಾಗಿದ್ದ ನನಗೆ ಈ ಹೊಸ ಹೊಣೆಗಾರಿಕೆ, ತಲೆಯ ಮೇಲೆ ಮಣಭಾರವಿದ್ದಂತೆ ಗೋಚರಿಸಿತು !

ಹೀಗೆ ತಲೆ ಕೆರೆದುಕೊಂಡು ಯೋಚಿಸುತ್ತಾ ಕುಳಿತಿರುವಾಗ ನನ್ನ ಕಣ್ಣೆದುರು ಬಂದದ್ದು ಕರ್ನಾಟಕ ರಾಜ್ಯದ ಮುಕುಟ ಎಂದು ಕರೆಯಲ್ಪಡುವ, ಹಿಂದೆ ‘ಮೊಹಮ್ಮದಾಬಾದ್’ ಎಂದು ಕರೆಯಲ್ಪಡುತ್ತಿದ್ದ ‘ಬೀದರ್’ ನಗರ ! ತೆಲಂಗಾಣ ಹಾಗು ಮಹಾರಾಷ್ಟ್ರಗಳೊಂದಿಗೆ ಸರಹದ್ದನ್ನು ಹಂಚಿಕೊಂಡಿರುವ ಈ ಜಿಲ್ಲೆ ಕರ್ನಾಟಕದ ಈಶ್ಯಾನ್ಯಕ್ಕೆ ಡೆಕ್ಕನ್ ಪ್ರಸ್ಥಭೂಮಿಯಲ್ಲಿ ಇದೆ. ಬಹಮನಿ ಸುಲ್ತಾನರ ಆಳ್ವಿಕೆಯನ್ನು ಕಂಡದ್ದಲ್ಲದೆ, ಬಸವ ಕಲ್ಯಾಣದಲ್ಲಿ ಉದಯವಾಗಿ ಎಲ್ಲೆಡೆ ಪಸರಿಸಿದ ಶರಣರ ಸಾಂಸ್ಕೃತಿಕ ಕ್ರಾಂತಿಗೂ ಸಾಕ್ಷಿಯಾಗಿದೆ. ಇಂತಹ ಐತಿಹಾಸಿಕ ನಗರವನ್ನು ನೋಡಬೇಕೆಂದು ನಿರ್ಧರಿಸಿ ಗೆಳೆಯನೊಂದಿಗೆ ನನ್ನ ಅಭಿಪ್ರಾಯವನ್ನು ಹಂಚಿಕೊಂಡೆ.

“kyaaaa??? Bidaaar?? Ye kaisa jagah hai bhai?”. ಉತ್ತರ ಭಾರತದಲ್ಲೇ ಹುಟ್ಟಿಬೆಳೆದು ದಕ್ಷಿಣ ಭಾರತದ ಬಗ್ಗೆ ಕೊಂಚವೂ ತಿಳುವಳಿಕೆಯಿಲ್ಲದೆ, ಅಸಡ್ಡೆಯಿಂದ ಈ ರೀತಿ ಕೇಳುವಾಗ, ನಗು ಹೊರಹೊಮ್ಮುತ್ತದೆ ! ಪಾಪ ಹೊಟ್ಟೆಪಾಡಿಗೆಂದು ದಕ್ಷಿಣದ ಮಹಾನಗರಿಗಳಿಗೆ ಗುಳೆ ಹೊರಡುವ ಇವರನ್ನು ಬದಲಾಯಿಸಲು ಹೇಗೆ ಸಾಧ್ಯ !

”ಅಯ್ಯೋ ಬಡಪಾಯಿ, ಅದು ಬಿದಾರ್ ಅಲ್ಲ ಮಾರಾಯ… ಬೀದರ್…its Bidar” ಎಂದು ವ್ಯಂಗ್ಯವಾಗಿ ಅವನ ಪ್ರಶ್ನೆಗೆ ಉತ್ತರಿಸಿದೆ !


Chapter 3 –

ಮುಂಜಾನೆ…ಆಗಷ್ಟೇ ನಿದ್ದೆಯಿಂದ ಮೈ ಕೊಡವಿ ಏಳುತ್ತಿರುವ ಸೂರ್ಯ..ಮೆಲ್ಲನೆ ಸೋಕುತ್ತಿರುವ ತಂಗಾಳಿ.. ‘ಬುಡು ಬುಡು’ ಸದ್ದು ಮಾಡಿಕೊಂಡು ನಮ್ಮನ್ನೋಯುತ್ತಿರುವ ‘ಬುಲೆಟ್’ ಬೈಕು…! A Perfect Combination !

ದಿನ ಪೂರ್ತಿ ಗಣಕ ಯಂತ್ರದ ಮುಂದೆ ಕೂತು ಯಾಂತ್ರಿಕ ಬದುಕಿಗೆ ಒಗ್ಗಿ ಹೋಗಿ, ‘ಮಿನಿ ಕಂಪ್ಯೂಟರ್’ ಆಗುವತ್ತ ಸಾಗುತ್ತಿರುವ ಜೀವನಕ್ಕೊಂದು ಸಣ್ಣ ವಿರಾಮ !

ಸಾಗುವ ದಾರಿ ಅಷ್ಟೇನೂ ದೂರವಿರಲಿಲ್ಲ. ಷಹರಿನ ಟ್ರಾಫಿಕ್ ದಾಟಿ ಮುಂಬೈ-ಹೈದರಾಬಾದ್ ಹೆದ್ದಾರಿ (NH 65) ರಲ್ಲಿ ಸೀದಾ 135km ಸಾಗಿದರೆ ಬೀದರ್ ಸೇರಿಬಿಡಬಹುದು !

ಬೆಳಗ್ಗೆ 6 ಘಂಟೆಗೆ ಹೊರಟ ನಾವು, ತಂಗಾಳಿಯನ್ನು ಆಸ್ವಾದಿಸಿ, ನೆಸರನುದಯವನ್ನು ಕಣ್ತುಂಬಿಕೊಂಡು, ಅವನಿಗೊಂದು ಸಲಾಂ ಹೊಡೆದು ಆಮೆಗತಿಯಲ್ಲಿಸಾಗುತ್ತಿದ್ದೆವು. ನಸುಕಿನ ಆ ನೀರವ ಮೌನದಲ್ಲಿ ,ಬುಲೆಟ್ ನ ಆ ‘ಬುಡು ಬುಡು’ ಸದ್ದು ಎಂತವರ ಮನಸ್ಸಿಗೂ ಮುದ ನೀಡಬಲ್ಲದು. ದೇವಾಲಯದಲ್ಲಿ ನಸುಕಿನ ಪೂಜೆಯ ವೇಳೆ ಬಾರಿಸುವ ಡೋಲಿನ ತರ !

ದಾರಿಮಧ್ಯ ಒಂದು ಚಹಾ ಹೀರಿ, ಪ್ರಯಾಣ ಮುಂದುವರೆಸಿದ ನಾವು ಅಮೆಗತಿಯನ್ನು ಅಷ್ವವೇಗಕ್ಕೆ ಬದಲಾಯಿಸಲಾರಭಿಸಿದೆವು. ತಲುಪಬೇಕಲ್ವ ಮಾರಾಯ್ರೆ ! ಹೀಗೆ ನಿಧಾನ ಸಾಗ್ತಾ ಇದ್ರೆ ಸಂಜೆ ವರೆಗೂ ಬೈಕ್ ಚಲಾಯಿಸಿ ಹೈರಾಣಗುತ್ತಿದ್ದೆವೇನೋ ! ಸೂರ್ಯ ಕೂಡ ತನ್ನ ಮತ್ತೊಂದು ಅವತಾರವನ್ನು ತೋರಿಸಲಾರಭಿಸಿದ್ದ! ಸುಡುಬಿಸಿಲಿನಿಂದ ಧರೆಯನ್ನು ‘ಚುಂಬಿಸಲು’ ಅಣಿಯಾಗಿದ್ದ.

ಶರವೇಗದಲ್ಲಿ ಬೈಕ್ ಚಲಾಯಿಸುತ್ತಿದ್ದ ವಿನೀತ್ ಅದೇನೂ ಕಂಡು ವೇಗವನ್ನು ಕಡಿಮೆ ಮಾಡುತ್ತಾ ಜೋರಾಗಿ ನಗಲಾರಂಭಿಸಿ ನನ್ನ ಗಮನವನ್ನು ಮುಂದೆ ಹೋಗುತ್ತಿದ್ದ ಆಟೋದ ಕಡೆ ಸೆಳೆದ. ಆ ದೃಶ್ಯವನ್ನು ನೋಡಿದ ನನಗೂ ನಗು ತಡೆಯಲಾಗಲಿಲ್ಲ.

ಭರಣಿಯಲ್ಲಿ ಉಪ್ಪಿನಕಾಯಿ ಹಾಕಿದಂತೆ ಜನರನ್ನು ತುರುಕಿಸಿ ಸಾಗುತ್ತಿದ್ದ ಆಟೋದ ಛಾವಣಿಯಲ್ಲಿಒಂದು ಬುರುಡೆ ಹೊರಬಂದಿತ್ತು! ಈ ಗಾಡಿಗೆ ಇವನೇ ‘ಸೈರನ್’ !! ಸುಮ್ಮನಿರುವುದು ಬಿಟ್ಟು, ತಲೆಯನ್ನು ತಿರುಗಿಸುತ್ತಾ ಗಾಳಿಯ ಚುಂಬನವನ್ನು ಆಸ್ವಾದಿಸುತ್ತಾ ಸಾಗುವ ಅವನ ಠೀವಿಯೋ ! car-bus ಗಳಲ್ಲಿ ventilator ಇದ್ದಂತೆ, ಈ ಮೂರ್ಖ ಶಿಖಾಮಣಿ ಆಟೋ ಗೆ ತೂತು ಕೊರೆದಿದ್ದ ! Low Cost Ventilator !!! ನಾವು ಸುಮ್ಮನಿರದೆ ಆಟೋದ ಸಮೀಪದಲ್ಲಿಈ ಮರ್ಕಟ ಮಾನವನನ್ನೇ ನೋಡುತ್ತಾ ಸಾಗುತ್ತಿದ್ದೆವು. (ಒಂದೆರಡು ಫೋಟೋ ಕೂಡ ಕ್ಲಿಕ್ ಮಾಡಿದ್ದೇನೆ !) ಪಾಪ ಪೇಚಿಗೆ ಸಿಲುಕಿದ ಈ ಭೂಪ ಒಂದು ನಗುವನ್ನು ಚೆಲ್ಲಿ ತನ್ನ ಶಿರವನ್ನು ಒಳ ಎಳೆದುಕೊಂಡ. ಆಹಾ… ದೇವರ ಸೃಷ್ಟಿಗೆ ನೂರು ನಮನ !!!!

ನಮ್ಮ ಗಾಡಿ ಮತ್ತೆ ಬೀದರ್ ಕಡೆ ಶರ ವೇಗದಲ್ಲಿ ನುಗ್ಗತೊಡಗಿತು..


Chapter 4 –

ಮೈಲುಗಲ್ಲುಗಳು ಮಿಂಚಿನಂತೆ ಕಂಡು ಮಾಯವಾಗುತ್ತಾ, ಬೀದರ್ ಸನಿಹದಲ್ಲಿದೆ ಅಂತ ಬಿಂಬಿಸುತ್ತಿದ್ದರೂ, ಬಿಸಿಲ ತಾಪಕ್ಕೆ ನಮ್ಮ ಎನರ್ಜಿ ಬರಿದಾಗಿ ಒಣ ಮೀನಿನಂತಾಗಿದ್ದೆವು !! 38 ಡಿಗ್ರಿ ಆಸುಪಾಸು ಮಾರಾಯ್ರೆ ! ಇದನ್ನೆಲ್ಲಾ ಲೆಕ್ಕಿಸದೆ ಬೈಕ್ ಚಲಾಯಿಸುತ್ತಿರುವಾಗ,ತುಸು ದೂರದಲ್ಲಿ ಜೋತುಬಿದ್ದಿದ್ದ ಒಂದು ನಾಮಫಲಕ ನೋಡಿ ಗಾಢ ನಿದ್ರೆಯಲ್ಲಿದ್ದ ನನ್ನ “ಉತ್ಸಾಹ” ಮೈ ಕೊಡವಿ ಎದ್ದು ನನಗೆ ಹೊಸ ಚೈತನ್ಯ ನೀಡಿತು !

—- “Telangana State Limit Ends here”, “ Welcome to Karnataka State” —-

“ಬೀದರ್ ಜಿಲ್ಲೆಗೆ ಸ್ವಾಗತ” – – ಕನ್ನಡ ನಾಮಫಲಕ ನೋಡಿ ತಿಂಗಳುರುಳಿದ್ದವು. ಬೈಕ್ ಪಕ್ಕದಲ್ಲಿ ನಿಲ್ಲಿಸಿ “Bro..Welcome to my State” ಎಂದೆ. ಅದಕ್ಕವನು, “kya likha hai bhai..Jalebi jesa dhikh raha hai” ಅಂತ ನಗುತ್ತ ಹೇಳಿದ. [ಏನ್ಮಾಡೋದು.. ಅವನ ತಪ್ಪಿಲ್ಲ, ದಕ್ಷಿಣದ ಪ್ರತಿಯೊಂದು ಲಿಪಿ ಕೂಡ ಇವರಿಗೆ ಜಿಲೇಬಿ ತರಾನೆ ಕಾಣೋದು] ಇಬ್ಬರೂ ನಗುತ್ತಾ ಮುಂದೆ ಸಾಗಿದೆವು.

ಮನಸ್ಸು ತುಂಬಾ ಪ್ರಶಾಂತವಾಗಿತ್ತು.. ನಮ್ಮ ರಾಜ್ಯ..ನಮ್ಮ ಜನ..ಅನ್ನೋ ಭಾವನೆ.. ಎರಡು ವರ್ಷ ಬೇರೆ ರಾಜ್ಯದಲ್ಲಿದ್ದು,ಕರ್ನಾಟಕ ರಾಜ್ಯದ ಗಡಿ ದಾಟಿದ ಕೂಡಲೇ ಪುಟಿದೆಳುತ್ತೇನೆ..ಕನ್ನಡ ಪದಗಳು ನೋಡಿದ ಕೂಡಲೇ ಮನಸು ಹಗುರಾಗುತ್ತದೆ.. “That’s the power of kannada”

ಯೋಜನೆಯಂತೆ ಮೊದಲು ಹೋಗಿದ್ದು “ಗುರು ನಾನಕ್ ಝಿರ ಗುರುದ್ವಾರ” ಕ್ಕೆ. ಮಿನಿ ಪಂಜಾಬ್ ನಂತೆ ಗೋಚರಿಸುವ ಒಂದು ಸ್ಥಳ. ಎಲ್ಲೆಂದರಲ್ಲಿ ಪಗಡಿ ಕಟ್ಟಿಕೊಂಡು ಕಾಣಸಿಗುವ ಸಿಖ್ ಧರ್ಮೀಯರು. “ಓಹೋ…ಪಾಜೀ..” ಅಂತ ಆದರದಿಂದ ಎದುರುಗೊಳ್ಳುವ ಜನ ! ಮೊದಲ ಸಾರಿ ಗುರುದ್ವಾರಕ್ಕೆ ಬಂದ ಅನುಭವ ! ಆಫೀಸ್ ನಲ್ಲಿ ಆಗೊಮ್ಮೆ ಈಗೊಮ್ಮೆ ಮರೀಚಿಕೆಯಂತೆ ಕಾಣಸಿಗುತ್ತಿದ್ದ ಇವರು, ಈಗ ಸರೋವರದಂತೆ ಕಣ್ಣ ಮುಂದೆ !

ತಲೆಗೊಂದು ವಸ್ತ್ರ ಸುತ್ತಿಕೊಂಡೇ ಒಳ ಹೋಗಬೇಕೆಂದು ಅಲ್ಲಿಯ ನಿಯಮವಾಗಿದ್ದರಿಂದ , ಕರವಸ್ತ್ರವನ್ನು ಸುತ್ತಿಕೊಂಡು ಒಳ ನಡೆದೆವು. ಇನ್ನೂ ಗುರುದ್ವಾರ ಪ್ರವೇಶಿಸಿರಲಿಲ್ಲ, ಅಷ್ಟರಲ್ಲೇ ಒಂದು “ಇಂಪಾದ” ದನಿ ಹಿಂದಿನಿಂದ ಕರೆದಂತಾಯಿತು.

“excuse me, thoda madad kar sakte ho kya?”- ಒಂದು ಸುಂದರವಾದ ಪಂಜಾಬಿ ಯುವತಿ ಬಳಿ ಬಂದು ವಿನಂತಿಸಿದಳು. ನಾವು ಸಹಾಯ ಮಾಡೋದ್ರಲ್ಲಿ ಎತ್ತಿದ ಕೈ. ಅದರಲ್ಲೂ ಒಂದು ಹುಡುಗಿ ವಿನಂತಿ ಮಾಡುವಾಗ ಹೇಗೆ ಬೇಡ ಅಂತ ಹೇಳೋಕಾಗತ್ತೆ ಹೇಳಿ ? ‘ಮಹಾರಾಣಿ’ಯವರ ವಿನಂತಿಗೆ ಸಮ್ಮತಿಸಿ, ರಾಜಭಟರಂತೆ ಅವಳನ್ನು ಹಿಂಬಾಲಿಸಿದೆವು. ಗುರುದ್ವಾರದ ಮುಖ್ಯ ದ್ವಾರದ ಬಳಿ ಕರೆದೊಯ್ದಆಕೆ, ನಮಗೆ ನೀಡಿದ ಕಾಯಕ ನಿಜಕ್ಕೂ ‘ಸ್ಮರಣೀಯ’.

ದ್ವಾರದ ಎದುರಿಗೆ ಕಾಲುಜ್ಜಲು ಹಾಸಿದ್ದ ಉದ್ದವಾದ ಚಾಪೆಯನ್ನು ಕೊಡವಿ, ಪುನಃ ಅದೇ ಜಾಗದಲ್ಲಿ ಹರಡಬೇಕಂತೆ !! ಇದನ್ನು ಮಾಡಲು ನಾವೇ ಸಿಕ್ಕಿದ್ದ ! ಕೆಲಸ ಒಪ್ಪಿಕೊಂಡಾಗಿದೆ, ಮಾಡಲೇ ಬೇಕಲ್ಲಾ!! ಅಯ್ಯೋ ವಿಧಿಯೇ..ನೀನೆಷ್ಟು ಕ್ರೂರಿ ~

ಇಬ್ಬರೂ ಮುಖ ಮುಖ ನೋಡಿಕೊಂಡು, ಇನ್ಯಾವ ಹುಡುಗಿ ಸಹಾಯ ಕೇಳಿದರೂ ಮಾಡಲಾರೆವು ಎಂದು ಸಂಕಲ್ಪ ತೊಟ್ಟು, ಆ ಚಾಪೆಯನ್ನು ಕೊಡವಿ, ಪುನಃ ಅದೇ ಜಾಗದಲ್ಲಿ ಹಾಸಿದೆವು.

“ಥ್ಯಾಂಕ್ಸ್ bhaiyya” ಅಂತ ಹೊರಟೇ ಹೋದಳು ! “bhaiyyaaa” ಗಾಯದ ಮೇಲೆ ಬರೆ !

[ಸಿಕ್ಖರು ತಮ್ಮ ಸೇವಾ ಮನೋಭಾವನೆಗೆ ಹೆಸರುವಾಸಿ. ಜಗತ್ತಿನೆಲ್ಲೆಡೆ ಯಾವುದೇ ಅವಘಡಗಳು ಸಂಭವಿಸಲಿ, ಸಿಕ್ಖರು ಅಲ್ಲಿ ಹಾಜರ್. “ಖಾಲ್ಸ” ಎಂಬ ಸಂಘಟನೆ ಹುಟ್ಟುಕೊಂಡಿದ್ದೇ ಇದೇ ಕಾರಣಕ್ಕೆ]

ಹಾಗೆಯೇ ಗುರುದ್ವಾರಕ್ಕೆ ಯಾರೇ ಹೋದರೂ ತಮ್ಮ ಕೈಲಾದ ಸೇವೆಯನ್ನು ಕೈಗೊಳ್ಳಬೇಕಂತೆ. ಅನಿರೀಕ್ಷಿತವಾಗಿ ನಮಗೂ ಸೇವೆ ಮಾಡುವ ಭಾಗ್ಯ ಒದಗಿ ಬಂತಲ್ಲಾ ಅನ್ನೋ ನೆಮ್ಮದಿ ಒಂದು ಕಡೆ..ಆ ಯುವತಿಯಿಂದ ‘ಭೈಯ್ಯ’ ಅನಿಸಿಕೊಂಡ ನೋವು ಇನ್ನೊಂದೆಡೆ !!!!!


Final Chapter

ತುಸು ಹೊತ್ತು ಗುರುದ್ವಾರದಲ್ಲಿ ವಿಶ್ರಾಂತಿ ಪಡೆದು ಇತಿಹಾಸಿಕ ‘ಬೀದರ್ ಕೋಟೆ’ ಯ ಕಡೆ ಪಯಣ ಬೆಳೆಸಿದೆವು. ಸೂರ್ಯನಾಗಲೇ ನೆತ್ತಿ ಮೇಲೆ ಕುಳಿತು ತಾಂಡವ ನೃತ್ಯ ಆರಂಭಿಸಿದ್ದ.ಬಿಸಿಲು ಹಾಗು ಉತ್ತರ ಕರ್ನಾಟಕ ! ಹೇಳಿಮಾಡಿಸಿದ ಸಂಯೋಜನೆ !!

ರೈಡ್ ಮಾಡುತ್ತಿದ್ದ ವಿನೀತ್ ಯಾವುದೋ ಯೋಚನೆಯಲ್ಲಿ ಮುಳುಗಿ, ಹಾದಿಯಲ್ಲಿದ್ದ HUMP ಗಮನಿಸದೆ ವೇಗವಾಗಿ ಕೊಂಡೊಯ್ದ ರಭಸಕ್ಕೆ, ಬೈಕ್ ಸ್ಟಾಂಡ್ ನ ಸ್ಪ್ರಿಂಗ್ ಬಿದ್ದದ್ದು ನಮ್ಮ ಗಮನಕ್ಕೆ ಬರಲೇ ಇಲ್ಲ. ಗೊತ್ತಾಗಿದ್ದು ‘ಢಣ್- ಢಣ್’ ಸದ್ದು ಬಂದಾಗಲೇ. ಜೋತುಬಿದ್ದ ಸ್ಟಾಂಡ್, ರಸ್ತೆಗೆ ತಾಗಿ ಸದ್ದು ಮಾಡಲಾರಂಭಿಸಿತ್ತು !

“ಸಾರ್…ಸ್ಟಾಂಡ್ ಸಾರ್” ಎಂದು ಎದುರಿಂದ ಬರುತ್ತಿದ್ದ ಬೈಕ್ ಸವಾರ ಚೀರಿದ. “ತುಂಡಾಗಿದೆ ಸಾರ್, ರಿಪೇರಿ ಮಾಡಿಸಬೇಕು. ಗ್ಯಾರೇಜ್ ಎಲ್ಲಿದೆ” ,ಅಂತ ಅವನನ್ನು ತಡೆದು ವಿಚಾರಿಸಿದೆ.

[ ನಮ್ಮ ಯೋಜನೆಯಲ್ಲಿ ಸಣ್ಣ ಬದಲಾವಣೆ. ಅಡಚಣೆಗಾಗಿ ವಿಷಾದಿಸುತ್ತೇನೆ]

ಅವನು ಹೇಳಿದ ಜಾಗ ಹುಡುಕುತ್ತ ಹೊರಟೆವು.ಹಿನ್ನೆಲೆಯಲ್ಲಿ ಬೈಕ್ ನ ‘ಬುಡು-ಬುಡು’ ಸದ್ದಿನ ಜೊತೆ ಸ್ಟಾಂಡ್ ನ ‘ಢಣ್- ಢಣ್’ ಸದ್ದು ! ಮೊದಲೇ ಬಿಸಿಲ ಝಳಕ್ಕೆ ಹೈರಾಣಗಿದ್ದ ನಮಗೆ, ಈ ಸದ್ದು ಮರಣ – ಮೃದಂಗದಂತೆ ಕೇಳತೊಡಗಿತು ! ಸ್ವಲ್ಪ ಮುಂದೆ ಹೋದ ಕೂಡಲೇ ಇನ್ನೊಬ್ಬ, “ಸಾರ್….ಸ್ಟಾಂಡ್ ಸಾರ್…”, ತುಂಬಾ ಕಾಳಜಿಯಿಂದ ಹೇಳಿದ. “ರಿಪೇರಿ ಮಾಡಿಸೋಕೆ ಹೋಗ್ತಾ ಇರೋದ್”, ಕೃತಕ ನಗೆಯಿಂದ ನಾ ಕೂಗಿದೆ . ಆಹಾ… ಏನ್ ಕಾಳಜಿ ಅಂತೀರಾ ! ತನ್ನ ಬೈಕ್ ನ ಟೈಯರ್ ಪನ್ಚರ್ ಆದ್ರೂ ಗೊತ್ತಾಗಲ್ಲ ಇಂತ ಮಹಾಶಯರಿಗೆ, ಎದುರಿನ ಬೈಕ್ ನ ಸ್ಟಾಂಡ್ ಕೆಳಗಿದ್ದರೆ ಇವರ ಜಂಘಾಬಲವೇ ಉಡುಗಿಹೋಗುತ್ತದೆ ! ನಂಬಿ, ಗ್ಯಾರೇಜ್ ತಲುಪುವಷ್ಟರಲ್ಲಿ ಇಪ್ಪತ್ತ್ಕೂ ಹೆಚ್ಚು ‘ಹಿತೈಷಿಗಳು’ ಸಿಕ್ಕಿದ್ದರು. ಎಲ್ಲರದು ಒಂದೇ ರಾಗ..ಒಂದೇ ತಾಳ.. “ಸಾರ್…ಸ್ಟಾಂಡ್ ಸಾರ್”. ಆ ಸ್ಟಾಂಡ್ಗೊಂದು ಸ್ಪ್ರಿಂಗ್ ಸಿಕ್ಕಿಸಿದಾಗಲೇ ಮನಶಾಂತಿ ಮರಳಿ ದೊರಕಿದ್ದು !

ಸವಾರಿ ಮುಂದುವರೆದು, ಕೋಟೆಯ ಜಾಡು ಸಿಗಲಾರಂಭಿಸಿತು. ಬಹುಮನಿ ಮನೆತನದ ಸುಲ್ತಾನ್ ಅಲ್-ಉದ್-ದಿನ್ ಬಹಮನ್ ಗುಲ್ಬರ್ಗಾದಿಂದ ಬೀದರ್‌ಗೆ ತನ್ನ ರಾಜಧಾನಿಯನ್ನು 1427 ರಲ್ಲಿ ವರ್ಗಾಯಿಸಿಕೊಂಡು ಮತ್ತು ಈ ಕೋಟೆಯನ್ನೂ ಇತರೆ ಇಸ್ಲಾಮಿಕ್ ಸ್ಮಾರಕಗಳನ್ನೂ ಕಟ್ಟಿಸಿದನಂತೆ. ಚೌಕೊನಾಕಾರದಲ್ಲಿರುವ ಈ ಕೋಟೆ 0.75 ಮೈಲಿ (1.21 km) ಉದ್ದ ಮತ್ತು 0.5 ಮೈಲಿ (0.80 km)ಅಗಲವಾಗಿದೆ. ಕೆಲವು ಪಾರ್ಶ್ವಗಳು ಅಜಾಗುರಕತೆಯಿಂದ ಹಾಳಾಗಿದ್ದರೂ, ಕೋಟೆಯ ಆಕರ್ಷಣೆಯೇನೂ ಕುಂದಿಲ್ಲ ! ಬೀದರ್ ಕೋಟೆಯನ್ನು ದಾಟುವ ಮೊದಲು ಮೂರು ಹಂತದ ನೀರಿನ ಕಂದಕವನ್ನು ದಾಟಿಕೊಂಡು ಬರಬೇಕಾಗುತ್ತದೆ. ಈ ಕಂದಕಗಳು ಈಗ ಬರಿದಾಗಿದ್ದರೂ, ನೀರಿನ ಜಾಡುಈಗಲೂ ಕಾಣಸಿಗುತ್ತದೆ.

ಏಳು ದ್ವಾರಗಳನ್ನು ಹೊಂದಿರುವ ಈ ಕೋಟೆಯ ಮುಖ್ಯ ದ್ವಾರವನ್ನು ಪರ್ಷಿಯನ್ ವಾಸ್ತುಶಿಲ್ಪದ ಮಾದರಿಯಲ್ಲಿ ಕಟ್ಟಲಾಗಿದೆ. ‘ಶೇರ್ಜ ದರ್ವಾಜಾ’ ಎಂಬ ದ್ವಾರದ ಹೊರ ಕವಚದಲ್ಲಿ ಎರಡು ಹುಲಿಗಳನ್ನು ಕೆತ್ತಲಾಗಿದೆ. ಶಿಯಾ ಸಮುದಾಯದ ನಂಬಿಕೆಯ ಪ್ರಕಾರ ಹುಲಿಯು ವಿಜಯದ ಸಂಕೇತವಾಗಿದೆ.ಈ ಹುಲಿಗಳ ಲಾಂಛನವು ಕೋಟೆಯನ್ನು ಶತ್ರುಗಳ ದಾಳಿಯಿಂದ ರಕ್ಷಿಸುತ್ತದೆ ಎಂದು ನಂಬಲಾಗಿತ್ತಂತೆ !

ಬೀದರ ಕೋಟೆಯೋಳಗಿರುವ ಅನೇಕ ಅರಮನೆ ಸಮೂಹಗಳಲ್ಲಿ ಮುಖ್ಯವಾದಾದ್ದು ‘ತಖ್ತ್ ಮಹಲ್’. ತಖ್ತ್ ಮಹಲ್ ಅರಮನೆಯನ್ನು ಬಹಮನಿ ಸುಲ್ತಾನನಾದ ‘ಅಹಮದ್ ಷಾ ಬಹಮನಿ’ 1426-1432 ಅವಧಿಯಲ್ಲಿ ನಡುವೆ ನಿರ್ಮಿಸಿದನಂತೆ. ಈ ಮಹಲ್ ಬೀದರ್ ಕೋಟೆಯ ಪಶ್ಚಿಮ ಭಾಗದಲ್ಲಿ ನೆಲೆಸಿದೆ. ಈ ಅರಮನೆಯ ಪ್ರಾಂಗಣವನ್ನು ಆಡಳಿತಗಾರರು ಖಾಸಗಿ ದರ್ಬಾರ್ ಮತ್ತು ಚರ್ಚೆಗಳಿಗಾಗಿ ವ್ಯಾಪಕವಾಗಿ ಬಳಸುತ್ತಿದ್ದರಂತೆ. ಕಟ್ಟಡದ ರಚನೆಯು ಸಂಕೀರ್ಣ ವಾಸ್ತುಶೈಲಿಯದ್ದಾಗಿದೆ. ಬಹಮನಿ ಸುಲ್ತಾನರ ಬೀದರ್ ಸಾಮ್ರಾಜ್ಯದ ಅನುಸ್ಥಾಪನ ಸೇರಿದಂತೆ ಅನೇಕ ಐತಿಹಾಸಿಕ ಘಟನೆಗಳು ಇಲ್ಲಿ ನಡೆದಿವೆ. ಪ್ರಸ್ತುತ ಕಾಲದಲ್ಲಿ ಬೀದರ್ ಕೋಟೆಯ ಕಮಾನುಗಳು ಮಾತ್ರ ಸುಸ್ಥಿತಿಯಲ್ಲಿವೆ.

ಕೋಟೆಯ ಹಲವು ಭಾಗ ವಿನಾಶದ ಅಂಚಿನಲ್ಲಿದೆ. ಪುರಾತತ್ವ ಇಲಾಖೆಯ ಕಚೇರಿ ಕೋಟೆಯ ಒಳ ಭಾಗದಲ್ಲಿದ್ದರೂ ಅಳಿವಿನಂಚಿನಲ್ಲಿರುವ ಕೋಟೆಯ ನವೀಕರಣದ ಕಾಮಗಾರಿ ನಡೆದ ಯಾವುದೇ ಗುರುತುಗಳಿಲ್ಲ ! ಇಲಾಖೆಯು ಇದೇ ರೀತಿ ನಿರ್ಲಕ್ಷ ತೋರಿದರೆ, ನಮ್ಮ ತೆಕ್ಕೆಯಲ್ಲಿರುವ ಒಂದು ಅಪರೂಪದ ರತ್ನ ಕೈ ಜಾರಿ ಹೋಗಬಹುದಾದ ಸನ್ನಿವೇಶ ಎದುರಾಗಬಹುದು. ಇದು ಬರೀ ಇಲಾಖೆಯ ಜವಾಬ್ದಾರಿಯಲ್ಲ. ಅಳಿವಿನಂಚಿನಲ್ಲಿರುವ ಇತಿಹಾಸಿಕ ಕಟ್ಟಡಗಳನ್ನು ಕಾಪಾಡುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ !

ಹೊತ್ತು ಮುಳುಗುವ ಮುಂಚೆ ಹೈದರಾಬಾದ್ ತಲುಪುವುದು ಅನಿವಾರ್ಯವಾಗಿದ್ದರಿಂದ, ಬೀದರ್ ನ ಪ್ರತಿಯೊಂದು ನೆನಪುಗಳನ್ನು ಮೆಲುಕು ಹಾಕುತ್ತ, ಕೋಟೆಗೊಂದು ಸಲಾಂ ಹೊಡೆದು ಹೊರಡಲು ಅಣಿಯಾದೆವು. ಬೈಕ್ ನ ಸದ್ದು ಕೋಟೆಗೆ ಅಪ್ಪಳಿಸಿ, ಪ್ರತಿದ್ವನಿಸಿತು ! ಕೋಟೆಯು ನಮ್ಮನ್ನು ಬೀಳ್ಕೊಡುತ್ತಿರುವಂತೆ !


By, Karthik Gowda.

A holiday ride to shravanabelagola !!

After a hangover of splendid ride to Horanadu, i was setting up for the next !!

Shravanabelagola scooted into my mind after cogitating all the day.
A solitary ride is usually my choice or with a pillion rider. I mean, I don’t wish to be a part of peloton.
My last ride to horanadu was accompanied by pavan. But this time i gotta a find new one since he was off to Bangalore.
I didn’t take too much of my time to decide whom to take along.
Why worry when i have my dad beside !! He was the prime person to strike my mind !
Reason being, he is also a lover of ride !! Like father, like son !!!
And moreover, he is my Best Friend too.
So the plan was all set and on 24th September 2015 we decided to take up the ride to shravanabelagola !

It is a city located near channarayana pattana of hassan district of Karnataka. There is a BAAHUBALI statue which is monolithic measuring 57ft. This statue was built during 983AD by chaavundaraya who was minister and commander in ganga dynasty. It is one of the largest free standing statues in the world.
In 2007 , this statue was voted by Indians as first of seven wonders of india !!

With full of excitement ,dad and I started our journey at 6:45am from kukke subramanya.
We took our first break at shiradi gadi temple. There is a myth in my locality that,the travellers should stop here and take the blessings of deity.
I prayed for the safe and smooth ride as i knew this will be a long ride covering more than 300km.
After sipping a cup of tea in the shop near by, we were set again !

image

Dad at gadi

Riding in the Ghat is my all time favorite and Shiradi ghat makes no mistake in proving it right !
Be carefull in the Ghat coz Bullet Tankers that supply LPG from Mangalore to Bangalore interrupts the smooth journey. With the tanks loaded full, it travells with the speed lesser than the ants !! And it is a hectic job to overtake it either !

image

Concrete ghat road

Concrete roads tempts any rider to accelerate. But its not so safe to do it here,as the vehicles comes from nowhere and may lead to crash !!

I had to keep a finger on pass light to signal the opposite vehicle that he is in a wrong lane !!!!

image

At Shiradi Ghat

Shiradi ghat was open for traveling since 3months and it had witnessed many accidents, majority caused due to toppling and over speed !!

Meanwhile ,our journey was safe and we were in sakleshpura by 8:45am. Having a brisk breakfast, we geared up again !!

image

Rice rotti

After a 2hr ride, we crossed hassan and ended up in the double road which  was more tempting than Ghat.
You can’t expect a vehicle moving with a speed lesser than 100kmph here !!!!

Its a common tendency of all to cope up with the environment !! I mean the speed here ! Even a slow moving vehicle gets a power to gear up !
But the pillion rider was not a kind of guy who enjoys speed !! It was my DAD !
He was tapping on my shoulder regularly and was screaming “60..60” lol 😀
Discussing lot many things and enjoying the slow ride,we rode across channarayanapattana and we were just 18km away from historical shravanabelagola !!
We were just few miles away, and dad exclaimed ,”al thoola…!” . I stopped and saw in the direction he was pointing.  And now its my turn to exclaim !!
Yes !! One can see the mighty bahubali as a tiny sculpture from there.

image

Vindhyagiri from far

Within a few minutes we were at the starting of hill, vindhyagiri. There are steps which leads people uphill.

image

Steps that leads uphill

Sunshine was so intense which made us to reach top of hill with much difficulty.

image

Dad !!

image

A view of Belagola

Visitors can have a splendiferous view of the belagola (: white pond) and chandragiri from here. ( atually pond is green in colour !)
There are many inscriptions carved on the rocks by jain saints.

image

Inscription under glass protection

image

Vadhegal basadi

image

Dad at vadhegal basadi

image

A tower

image

A distant veiw of vadhegal basadi

image

Beautiful carvings

image

Rock door

image

Inscription on Rock

image

Entrance of baahubali basadi

image

Baahubali from outer premise

image

View from basadi

image

A basadi of jain monk

image

image

Selfie with dad

Within a  minute ,we were in front of one of the largest monolithic sculpture : The mighty Baahubali !
The ravishing architecture !!!!

image

Monolithic baahubali : crown of jain cult

Baahubali was a legendary king who sacrificed everything to find himself !!

The place is so calm and best place to find oneself !!!
This place is a must visit place and i’m sure you will feel blessed here 🙂

image

View of vindyagiri from parking lot

We spent some of our time there and started back to home !
At the end of journey, odometer said me that ,it was a 305.1km ride which is my personal longest single day ride 🙂
Such a tremendous ride !
I really enjoyed it 🙂

image

“Ride for RESPECT”

Ride to Horanadu via charmadi

Its always been said that “road trips are addictive”. It is true in my life too. After a wonderful lone ride to Bisile, i was planning for the second.
This time to Horanadu located in chikamagalur district of Karnataka. Horanadu is famous for “shri annapoorneshwari temple”.
I got a specific reason behind choosing this place as the destination. The reason is,I have to travel through one of the beautiful spot Charmadi ghat to reach horanadu.
I had gone through this ghat by bus earlier. That too back in 2012. I was amazed to see the beautiful view of western ghat in charmadi. Such a tremendous view. From that time i was curious regarding this place and i always wished to ride here.
So i thought this will be the right time to visit both places at a time.
I shared this road Trip with my friend pavan kumar. He happily agreed to join me.
September 2 2015. We discussed much and set this as the date of ride. Pavan estimated that the trip would be of 300km ride in total.
As on date, i started my journey at 6:30am from kukke subramanya. I went on a lone ride for about a distance of 18km to Mardhala from where i picked pavan.
we broke our fast at nedle. It was around 8:00am. We got our strength back and started our journey to charmadi. We travelled a distance of 30km via dharmasthala and Ujire to reach the starting point of ghat.

image

selfie at starting of ghat

We made our tank empty and took some rest. Till now road conditions were good and we were worried about the next journey. Yes, road was pathetic with lot of curves.
We were so careful in riding and by 10:40am we reached the top of ghat. The majestic beauty of charmadi drove us crazy. We captured the beauty in our camera and spent 15minutes enjoying nature.

image

View near road

image

It looks like different layers of hills !!

image

Deep point

image

It's like a carpet !!

image

As if it touches the sky !!!

image

Nature at its best !

image

A click of Pavan in charmadi

image

Enjoying beautiful nature !!

image

A small waterfall roadside

image

A river seen deep in forest

image

No comparison to the beauty of nature ! Agree?

image

Clipping the mountain !

image

My Black Bird enjoying the beauty !!

Without a mood to leave the place we started again and reached kottigehara. Mile stones said that we are still 40km ahead of horanadu. The road condition was not that good but the scenic beauty made us to ride happily. There were lot of estates road side. I felt as if roads were done in between the estates !
Alas ! Another waterfall ! We stopped there and freshened ourselves.

image

Waterfall !

image

Selfie le le re !

“Riders should be very careful here as roads are narrow and with lots of curves”.
We reached a place called kalasa .We visited kalaseshwara temple and felt blessed there. Horanadu is 9km from here.

image

Kalasa temple : main entrance

image

Temple

After a having a cup of coffee we started our final leg of journey to horanadu. sunshine and back pain was interrupting our journey. That’s why we were stopping here and there.
“As Sunshine is so irritating, better cover yourselves well”
Finally at 1pm we reached Horanadu. We made it finally. My odometer was showing we have travelled 154km !
That too in a road like this !! We were so satisfied !!

image

Annapoorneshwari temple

image

Temple permises

image

Temple entrance

mesmerizing beauty of charmadi, holiness of Horanadu and Kalasa made this trip so special.
I heartily thank pavan for accompanying me in this road trip.

image

Pavan@chaarmadi

image

Capturing the beauty

It was a 304km ride when I reached back home. This ride will be in my memory forever.

Ride for Respect”

My first road trip

Till the end of my engineering education i didn’t think more about the traveling. I always wanted to travel to new places and meet new people. It became my passion now. It makes me human.
My first lone ride was on August 18 2015.
I had decided to ride on my  bajaj pulsar-150  to one of the beautiful places of Karnataka. Its BISILE. It’s a ghat section surrounded by thick forest.
Its around 25km from kukke subramanya which is a famous Temple in Karnataka.
I had a rough idea about the road conditions because rarely vehicles travel there. Only bikers like me take a chance to enjoy the scenic beauty of it.
A few distance was a concrete road. Later on it was completely off-road.
After traveling 8km i stopped at gadi chamundi temple and took her blessings.

image

Gadi chamundi temple (bisile)

image

Next phase was of bit difficulty as the road was at its worst condition !

image

Road conditions

It was raining heavily too. Its heavy mansoon.
I am crazy in taking photos. That’s why i didn’t care about the rain and continuously clicked photos in my new lenovo a7000. It was completely wet that time !
Off road ride was at its best. Ride in mansoon is always awesome.

image

image

After riding a 10km more i reached the beauty spot where we can see 7 hills of western ghats.

image

image

image

Since it was raining i missed the beautiful view. But i really felt like i was in Kashmir by seeing the mist covering the hills !! I was really happy being there.
I thought of ending my journey there and come back home ! But i was bit afraid of the road conditions. That’s why i moved further to Koodu rasthe from there i can move to sakleshpura.

Actually there is a specific reason behind this decision. Why because if i go to sakleshpura, i can ride in shiradi ghat which is another riders spot !!

It was around 30km from koodu rasthe. That ride till sakleshpura was not that interesting.
After a hour i reached donigal which is the starting point of shiradi ghat.

Heavy vehicles were prohibited in that road because of road work. Bikers were

image

image

image

image

image

image

image

image

I had a awesome day. Ride in rain is often challenging. I some how made it.